Index   ವಚನ - 3    Search  
 
ಆವಂಗದ ಮರೆಯಲ್ಲಿದ್ದು ಕಾದುವ ಭಟನು; ಆ(ವಂಗ)ದ ಮರೆಯ ಸತ್ವವೋ? ತನ್ನ ಹೃದಯದ ಸತ್ವವೋ? ಒಂದನಹುದು ಒಂದನಲ್ಲಾ, ಎಂದಡೆ ಕ್ರೀ ನಿಃಕ್ರೀಯೆಂಬ ಉಭಯವಿಲ್ಲ. ಎರಡನೊಡಗೂಡಿ ಒಂದನರಿದಿಹೆನೆಂದಡೆ ಸಾಕಾರವೊಂದು, ನಿರಾಕಾರವೊಂದು. ಸಾಕಾರವನು ನಿರಾಕಾರವನು ಏಕೀಕರಿಸಿ ಕಂಡೆಹೆನೆಂದಡೆ ಅದು ಒಂದು ದೃಷ್ಟ, ಒಂದು ತನ್ನಷ್ಟ. ಆ ಉಭಯದಂಗ ಒಂದಂಗವಾಗಿ ಕರ್ಪುರದ ಗಿರಿಯಲ್ಲಿ ಉರಿಯುದಿಸಿದ ತೆರನಂತೆ ಉಭಯ ಏಕವಾಗಿಯಲ್ಲದೆ ಭೋಗಬಂಕೇಶ್ವರಲಿಂಗವನರಿಯಬಾರದು.