Index   ವಚನ - 7    Search  
 
ಭರಿತಾರ್ಪಣವೆಂದು ಲಿಂಗಕ್ಕೆ ಸಮರ್ಪಿಸಿದ ಮತ್ತೆ ಪ್ರತಿಪ್ರಸಾದವೆಂದು ಕೊಂಬಲ್ಲಿ ಭರಿತಾರ್ಪಣವೆಂತುಟಾಯಿತ್ತು? ತನ್ನಯ ಘಟದ ಹೆಚ್ಚುಗೆಯೊ? ಅಲ್ಲಾ, ಭರಿತಾರ್ಪಣದ ವ್ರತದ ನಿಶ್ಚಯವೊ? ಕಟ್ಟಿನ ವ್ರತಕ್ಕೆ ಪುನರಪಿ ಕ್ರೀಯುಂಟೆ? ಸತ್ಯ ಜಾರಿದ ಮತ್ತೆ ಮುಕ್ತಿಯ ಪಥ ಅವಂಗುಂಟೆ? ಇಂತೀ ಕಂಡವರ ಕಂಡು, ಕೈಕೊಂಡು, ಅವರೊಂದಾಗಿ ಆಡಿ, ಅವರ ಸಂಸರ್ಗದಿಂದವ ಕಲಿತು,ಅವರು ಹಿಂಗಿದ ಮತ್ತೆ ತಾನೆಂದಿನಂತಹ ಕ್ರಿಯಾಭಂಡನ ಭರಿತಾರ್ಪಣಲಂಡನ ಮತ್ತಾವ ಕ್ರೀಯಲ್ಲಿಯೂ ತಪ್ಪಿ, ಆ ತಪ್ಪಿಗೆ ವ್ರತವ ಹೆಚ್ಚಿಸಿಕೊಂಡಹೆನೆಂಬ ದುರ್ಮತ್ತ ಸುರಾಪಾ[ನಿಯಿಂ]ದತ್ತ ಕಾಣದಿರ್ದಡೆ ಭಕ್ತಿಗೆ ಸಲ್ಲ, ಮುಕ್ತಿಯವಂಗಿಲ್ಲ, ಸದ್ಭಕ್ತರೊಳಗಲ್ಲ, ಮಿಕ್ಕಾದ ಕೃತ್ಯ ಅವಂಗಿಲ್ಲ, ಇದು ಸತ್ಯ, ಭೋಗಬಂಕೇಶ್ವರಲಿಂಗ ಸಾಕ್ಷಿಯಾಗಿ.