•  
  •  
  •  
  •  
Index   ವಚನ - 464    Search  
 
ಕುಲಮದ ಛಲಮದ ವಿದ್ಯಾಮದದವರ ತೋರದಿರಾ. ಅವರ ಅರೂಢಪದವಿಯನೆನಗೆ ತೋರದಿರಾ. ಅವರ ಗರುವ ಗಂಭೀರವನೆನಗೆ ತೋರದಿರಾ. ಶಮೆದಮೆಯುಳಿದು ದಶಮುಖ ನಿಂದು ಲಿಂಗದಲ್ಲಿ ಲೀಯವಾದವರನಲ್ಲದೆ, ಎನಗೆ ತೋರದಿರಾ ಗುಹೇಶ್ವರಾ.
Transliteration Kulamada chalamada vidyāmadadavara tōradirā. Avara arūḍhapadaviyanenage tōradirā. Avara garuva gambhīravanenage tōradirā. Śamedameyuḷidu daśamukha nindu liṅgadalli līyavādavaranallade, enage tōradirā guhēśvarā.
Hindi Translation कुलमद, छ्लमद, विद्यामद के लोगों को मत दिखाओं। उनका आरूढ पद मुझे मत दिखा ओ। उनकी श्रेष्ट गंभीरता मुझे मतदिखा ओ। शमा दमा नाश होकर दश दिशाओं में भटकते मत रोककर लिंग में लीन न होनेवालों को मुझे मत दिखाओ, गुहेश्वरा। Translated by: Eswara Sharma M and Govindarao B N
Tamil Translation குலச்செருக்கு, பிடிவாதச் செருக்கு, கல்விச் செருக்கு உடையோரை எனக்குக் காட்டாய் அவர்தம் உயர்ந்தநிலை, பதவிகளை எனக்குக் காட்டாய் அவர்தம் செருக்கு ஆணவத்தை எனக்குக் காட்டாய் அடங்கிய மனம், புலனடக்கம், திசைதோறும் ஓடும் மனமொடுங்கி, இலிங்கத்துடன் இணைந்தோரைத் தவிர எனக்குக் காட்டாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆರೂಢ ಪದವಿ = ಉಚ್ಚ ಸ್ಥಾನಮಾನಗಳು, ಪದವಿ-ಪ್ರಶಸ್ತಿಗಳು, ಸಾಧಿಸಿದ ಸಿದ್ದಿಗಳು; ಕುಲಮದ = ನಾವು ಕುಲೋತ್ತಮರು ಎಂಬ ಭಾವ; ಗಂಭೀರತನ = ಬಿಗುಮಾನ; ಗರುವ = ಗರ್ವ; ಛಲಮದ = ನಾವು ಛಲಿಗಳು, ಯಾವುದಕ್ಕೂ ಹಿಂಜರಿಯುವವರಲ್ಲ, ಪಟ್ಟುಬಿಡುವವರಲ್ಲ ಎಂಬ ಹಠಮಾರಿತನ; ತೋರದಿರಾ = ಸರ್ವಥಾ ತೋರಿಸಬೇಡ; ದಮೆ = ಇಂದ್ರಿಯನಿಗ್ರಹ; ದಶಮುಖ = ಹತ್ತು ದಿಕ್ಕಿನಲಿ ಹರಿವ ಮನ; ನಿಂದು = ಸ್ಥಿರಗೊಂಡು, ಉನ್ಮನವಾಗಿ; ಲಿಂಗದಲ್ಲಿ = ನಿಷ್ಕಲಲಿಂಗದಲ್ಲಿ; ಲೀಯವಾಗು = ಸಮರಸಗೊಳ್ಳು; ವಿದ್ಯಾಮದ = ನಾವು ಎಲ್ಲವನು ತಿಳಿದವರು, ಶಾಸ್ತ್ರಕೋವಿದರು, ನಮ್ಮ ವಿದ್ವತ್ತಿಗೆ ಯಾರೂ ಸಮಬಾರರು ಎಂಬ ಅಹಂತೆ; ಶಮೆ = ಮನೋನಿಗ್ರಹ; Written by: Sri Siddeswara Swamiji, Vijayapura