Index   ವಚನ - 3    Search  
 
ಎನ್ನ ತನು ಬಸವಣ್ಣನ ಶುದ್ಧಪ್ರಸಾದವ ಕೊಂಡಿತ್ತು, ಎನ್ನ ಮನ ಚೆನ್ನಬಸವಣ್ಣನ ಸಿದ್ಧಪ್ರಸಾದವ ಕೊಂಡಿತ್ತು, ಎನ್ನ ಪ್ರಾಣ ಪ್ರಭುದೇವರ ಪ್ರಸಿದ್ಧಪ್ರಸಾದವ ಕೊಂಡಿತ್ತು. ಇಂತೀ ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರಂಗೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.