ತಾ ದೇವರಾದ ಮತ್ತೆ
ಪೂಜೆಗೊಂಡವರಲ್ಲಿ ಅಡಗಡಿಗೆ ಗಡಿತಡಿಗೆ ಬರಲೇತಕ್ಕೆ?
ತಾ ಪರಮನಿರ್ವಾಣದಲ್ಲಿ ತಿರುಗಿ
ಆಡು[ವ]ವರ, [ಕೂ]ಡುವವರ, ಒಳ್ಳಿತ್ತ
ಸಡಗರಿಸಿ ನುಡಿವ[ವ]ರ ಒಡಗೂಡಿ ಬಾಗಿಲು
ಚಾವಡಿಮನೆಯಲ್ಲಿ ನಿಲ್ಲು, ಬಾ-ಹೋಗೆನಿಸಿಕೊಳಲೇತಕ್ಕೆ?
ಅವರನೆಲ್ಲಿ ಕಂಡಲ್ಲಿಯೆ ನೋಡಿ,
ಅವರು ಸಲ್ಲೀಲೆಯಲ್ಲಿ ಮಾಡುವುದ ಕೇಳಿ
ಅಲ್ಲಿಯೆ ಪರಮಾನಂದದಲ್ಲಿ ಸುಖಿಯಹ ಮಹಾತ್ಮಂಗೆ
ಅಲ್ಲಿಯಿಲ್ಲಿಯೆಂಬ ಭಾವದ ಭ್ರಮೆಯಿಲ್ಲ,
ಗಾರುಡೇಶ್ವರಲಿಂಗವನರಿದ ಶರಣ.
Art
Manuscript
Music
Courtesy:
Transliteration
Tā dēvarāda matte
pūjegoṇḍavaralli aḍagaḍige gaḍitaḍige baralētakke?
Tā paramanirvāṇadalli tirugi
āḍu[va]vara, [kū]ḍuvavara, oḷḷitta
saḍagarisi nuḍiva[va]ra oḍagūḍi bāgilu
cāvaḍimaneyalli nillu, bā-hōgenisikoḷalētakke?
Avaranelli kaṇḍalliye nōḍi,
avaru sallīleyalli māḍuvuda kēḷi
alliye paramānandadalli sukhiyaha mahātmaṅge
alliyilliyemba bhāvada bhrameyilla,
gāruḍēśvaraliṅgavanarida śaraṇa