Index   ವಚನ - 5    Search  
 
ಆಯುಃ ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ'- ಎಂದು, ಇದಕ್ಕಂಜಿ ಉಮ್ಮಳಿಸುವ ಮಾಯಾಪ್ರಸೂತ ಮನವ ನೋಡ! ಆಯುಷ್ಯವೇ ಲಿಂಗ, ಶ್ರೀಯೇ ಜಂಗಮ! ನಿಧನವೆ ಸುಜ್ಞಾನ, ವಿದ್ಯವೆ ಶಿವಮಂತ್ರ, ದೇಹವೆ ದಾಸೋಹಮ್ಮೆಂದು ಶ್ರೀಗುರು ಬರೆದನಾಗಿ! ಹೊಟ್ಟೆಯ ಶಿಶುವಿಂಗೆ ಬೇರೆ ಬಟ್ಟಲ ಬಯಸುವರೊಳರೆ? ಮಹಾಘನ ಸೋಮೇಶ್ವರನಲ್ಲಿ ಅಯೋನಿಸಂಭವನಾದ ಶರಣಂಗೆ