ಹಗಲ ಇರುಳ ಮಾಡಿ,
ಇರುಳ ಹಗಲ ಮಾಡಿ
ಆಚಾರವ ಅನಾಚಾರವ ಮಾಡಿ,
ಅನಾಚಾರವ ಆಚಾರವ ಮಾಡಿ
ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ
ನುಡಿವವರ ಮಾತ ಕೇಳಲಾಗದು, ಗುಹೇಶ್ವರಾ.
Transliteration Hagala iruḷa māḍi,
iruḷa hagala māḍi
ācārava anācārava māḍi,
anācārava ācārava māḍi
bhaktana bhaviya māḍi, bhaviya bhaktana māḍi
nuḍivavara māta kēḷalāgadu, guhēśvarā.
Hindi Translation दिन को रात बनाकर, रात को दिन बनाकर ,
आचार को अनाचार बनाकर ,अनाचार को आचार बनाकर,
भक्त को भवि बनाकर,भवि को भक्त बनाकर,
बोलनेवालों की बात नहीं सुनना है गुहेश्वरा।
Translated by: Eswara Sharma M and Govindarao B N
Tamil Translation பகலை இரவாக்கி, இரவைப் பகலாக்கி
ஆசாரத்தை அனாசாரமாக்கி, அனாசாரத்தை ஆசாரமாக்கி
பக்தனைப் பக்தனற்றவனாக்கி, பக்தனற்றவனைப் பக்தனாக்குவோர்
தம் சொற்களைக் கேட்கலாகாது குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನಾಚಾರವ ಆಚಾರವ ಮಾಡು = ಮನಸ್ಸೇಚ್ಚೆಯಾಗಿ ವರ್ತಿಸುವ ಆಚಾರಹೀನರನ್ನು ಸದಾಚಾರಿಗಳೆಂದು ಬಣ್ಣಿಸುವುದು; ಆಚಾರವ ಅನಾಚಾರವ ಮಾಡು = ಸದಾಚಾರಸಂಪನ್ನರಾದ ಸುಶೀಲರನ್ನು ಅನಾಚಾರಿಗಳೆಂದು ದೂಷಿಸುವುದು; ಇರುಳನು ಹಗಲ ಮಾಡು = ಅಸತ್ಯವನ್ನು ಸತ್ಯವೆಂದು ಸಾರು; ಕೇಳಲಾಗದು = ಕೇಳುವುದು ಸೂಕ್ತವಲ್ಲ(ಇವರ ಮಾತುಗಳಿಗೆ ಯಾವ ಬೆಲೆಯೂ ಇಲ್ಲ); ನುಡಿವವರ = ಹೀಗೆ ವಿಪರೀತವಾಗಿ ನುಡಿವವರ; ಭಕ್ತನ ಭವಿಯ ಮಾಡು = ತನು-ಮನ-ಧನಗಳನ್ನು ಗುರು-ಲಿಂಗ-ಜಂಗಮ ಸೇವೆಯಲ್ಲಿ ಭಕ್ತಿಯಿಂದ ಸವೆಸುವವ ಭಕ್ತ; ಅಂಥ ಭಕ್ತನನ್ನು ಭಕ್ತಿಯಿಲ್ಲದ ಭವಿ ಎಂದು; ಭವಿಯ ಭಕ್ತನ ಮಾಡು = ತನು-ಮನ-ಧನಗಳಲ್ಲಿ ವಂಚನೆಯ ಮಾಡಿಯೂ ಭಕ್ತನೆಂದು ಹೇಳಿಕೊಳ್ಳುವವ ಭವಿ; ಅಂಥ ಭವಿಯನ್ನು ಭಕ್ತನೆಂದು ಶಂಸಿಸುವುದು.; ಮಾತ = ಮಾತುಗಳನ್ನು, ಅಭಿಪ್ರಾಯಗಳನ್ನು; ಹಗಲನು ಇರುಳು ಮಾಡು = ಸತ್ಯವನು ಅಸತ್ಯವೆಂದು ಸಾರು;
Written by: Sri Siddeswara Swamiji, Vijayapura