•  
  •  
  •  
  •  
Index   ವಚನ - 473    Search  
 
ಇಷ್ಟಲಿಂಗವ ತೋರಿ ಮೃಷ್ಟಾನ್ನವ ಹಾರುವವರಿಗೆ ಇಷ್ಟಾರ್ಥಸಿದ್ಧಿ ಇನ್ನೆಲ್ಲಿಯದೊ? ಅದೆಲ್ಲಿಯದೊ ಲಿಂಗ ಅದೆಲ್ಲಿಯದೊ ಜಂಗಮ? ಅದೆಲ್ಲಿಯದೊ ಪಾದೋದಕ ಪ್ರಸಾದ? ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು, ಗುಹೇಶ್ವರಾ ನಿಮ್ಮಾಣೆ.
Transliteration Iṣṭaliṅgava tōri mr̥ṣṭānnava hāruvavarige iṣṭārthasid'dhi innelliyado? Adelliyado liṅga adelliyado jaṅgama? Adelliyado pādōdaka prasāda? Alladāṭavanāḍi ellarū mundugeṭṭaru, guhēśvarā nim'māṇe.
Hindi Translation इष्टलिंग दिखाकर भूरि भोजन करनेवालों को इष्टार्थ सिद्धि कहाँ की है ? कहाँ का लिंग, कहाँ का जंगम ? वह कहाँ का पादोदक प्रसाद ? बुरे काम करते सब नाश हो गये, गुहेश्वर तुम्हारी कसम। Translated by: Eswara Sharma M and Govindarao B N
Tamil Translation இஷ்ட லிங்கத்திற்கு அர்ப்பித்துச் சுவைமிக்க உணவை உண்போர்க்கு விரும்பியதை அடையவியலுமோ? பரசிவ அருளை, சிவஞானத்தை எய்துவரோ? பேரின்ப நிலையை எய்தவியலுமோ? சரணர் ஏற்காத வாழ்க்கையை வாழ்ந்து பிறவி வலையில் சிக்குண்டனர் குஹேசுவரனே, உம்மாணை. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಲ್ಲದಾಟ = ಶಿವಯೋಗ ಮಾರ್ಗಕ್ಕೆ ಸಲ್ಲದ ವರ್ತನೆ, ಶರಣರು ಮೆಚ್ಚದ ಬದುಕು; ಇಷ್ಟಲಿಂಗವ ತೋರು = ಕರಸ್ಥಲದ ಇಷ್ಟಲಿಂಗಕ್ಕೆ ನಿವೇದಿಸು; ಇಷ್ಟಾರ್ಥ ಸಿದ್ದಿ = ಶಿವಯೋಗ ಸಾಧನೆಯಿಂದ ಸಿದ್ದಿಸುವ ಜೀವ-ಶಿವ ಸಮರತಿ; ಜಂಗಮ = ಜ್ಞಾನ, ಪರಶಿವಜ್ಞಾನ, ಆತ್ಮಾನುಭೂತಿ; ಪಾದೋದಕ = ಶಿವಕಾರುಣ್ಯ; ಪ್ರಸಾದ = ಪರಮ ಆನಂದ; ಮುಂದುಗೆಡು = ಹಾಳಾಗು, ಭವದಲ್ಲಿ ಸಿಕ್ಕಿಹೋಗು; ಮೃಷ್ಟಾನ್ನವ ಹೊಡೆ = ಯಥೇಚ್ಚವಾಗಿ ಮೃಷ್ಟಾನ್ನವನ್ನು ಭುಂಜಿಸು; ಲಿಂಗ = ಇಷ್ಟಲಿಂಗ, ಪರಶಿವ; Written by: Sri Siddeswara Swamiji, Vijayapura