Index   ವಚನ - 15    Search  
 
ಕ್ರೀಯನೆ ಭಾವಿಸಿಹೆನೆಂದಡೆ ಮೃತ್ತಿಕೆಯ ಸಾಕಾರವ ತೊಳೆದು ನಿರ್ಮಳವನರಸುವಂತೆ. ಶೂನ್ಯದಲ್ಲಿ ವಿಶ್ರಮಿಸಿ ಕಂಡೆಹೆನೆಂದಡೆ ಕೆಂಗಳಿಗೆಟ್ಟದು ಕೈಮುಟ್ಟದು, ಆತ್ಮಂಗೆ ಅಗೋಚರ ಇಂತೀ ಉಭಯವನೊಡಗೂಡಿ ಕಂಡೆಹೆನೆಂದಡೆ ಕ್ರೀಗೆ ಅಂಗ ನಿಲ್ಲದು; ಆತ್ಮಂಗೆ ಸಲ್ಲದು. ಉಭಯದಾಟ ಕೂಡಿ ನಿನ್ನರಿವನ್ನಕ್ಕ ಕಲ್ಪಿತಾಂತರ ಕೂಟವಾಗುತ್ತಿದೆ. ಇದರಚ್ಚುಗವ ಬಿಡಿಸು ಗೋಪತಿನಾಥ ವಿಶ್ವೇಶ್ವರಲಿಂಗ.