Index   ವಚನ - 14    Search  
 
ಕಾವುದು ಅಟ್ಟುವುದು ಮೀರಿದಡೆ ಹೊಡೆವುದು. ಗಣ್ಣಿನ ಕೋಲ ಹಿಡಿದು ಗೋವ ಕಾವುತ್ತಿರಲಾಗಿ, ಕಾವಗಣ್ಣಿನಲ್ಲಿ ಕರ್ಮವಡಗಿ, ಕಟ್ಟುವ ಕಗ್ಗಣ್ಣಿನಲ್ಲಿ ಧರ್ಮವಡಗಿ, ಮೀರುವಗಣ್ಣಿನಲ್ಲಿ ವರ್ಮವಡಗಿ, ತ್ರಿವಿಧವನೊಳಕೊಂಡ ಕೋಲು ಗೋವಿನ ಬೆನ್ನಿನಲ್ಲಿ ಲಯವಾಯಿತ್ತು, ಗೋಪತಿನಾಥ ವಿಶ್ವೇಶ್ವರಲಿಂಗವನರಿಯಲಾಗಿ.