ವಚನ - 474     
 
ಕಂಕುಳೆಂಬುದು ಕವುಚಿನ ತವರುಮನೆ. ಕರಸ್ಥಲವೆಂಬುದು [ಕೈ] ಕೆಟ್ಟ ಹುಣ್ಣು. ಅಮಳೋಕ್ಯವೆಂಬುದು ಬಾಯ ಭಗಂದರ. ಅಂಗಸೋಂಕೆಂಬುದು ಪಾಪದ ತವರುಮನೆ. ಉತ್ತಮಾಂಗವೆಂಬುದು ನೆತ್ತಿಯ ಮೃತ್ಯು. ಕಂಠವೆಂಬುದು ಗಂಟಲ ಗಾಣ. ಮತ್ತೆ, ಗುಹೇಶ್ವರನ ಮಾತು ನಿಮಗೇಕೆಲವೊ?