ಶಕ್ತಿ ಸಮೇತವಾಗಿ ಇಹನ್ನಕ್ಕ ಬಿಂದುವಿನ ಸತ್ವ
ಕೂಟಸ್ಥಬಿಂದು ಜಾರಿದಲ್ಲಿ ನಿಂದಿತ್ತು ಸತ್ವ
ಅರಿವು ಮುಖದಿಂದ ಕ್ರಿಯಾಶಕ್ತಿಯ ಕೂಟ
ಅರಿವು ಜಾರಿದಲ್ಲಿ ಮರೆದು ಹೋಯಿತ್ತು ಕ್ರಿಯಾಭೇದ.
ನಾನರಿವುದಕ್ಕೆ ಅರಿವ ತೋರು
ನೋಡುವುದಕ್ಕೆ ಕುರುಹ ತೋರು
ನಾನಡುಗುವುದಕ್ಕೆ ಗುಡಿಯ ತೋರು
ಗೋಪತಿನಾಥ ವಿಶ್ವೇಶ್ವರಲಿಂಗಾ.
Art
Manuscript
Music
Courtesy:
Transliteration
Śakti samētavāgi ihannakka binduvina satva
kūṭasthabindu jāridalli nindittu satva
arivu mukhadinda kriyāśaktiya kūṭa
arivu jāridalli maredu hōyittu kriyābhēda.
Nānarivudakke ariva tōru
nōḍuvudakke kuruha tōru
nānaḍuguvudakke guḍiya tōru
gōpatinātha viśvēśvaraliṅgā.