Index   ವಚನ - 41    Search  
 
ಹಸುವ ಕಾವಲ್ಲಿ ದೆಸೆಯನರಿತು, ಎತ್ತ ಕಾವಲ್ಲಿ ಪೃಥ್ವಿಯನರಿದು, ಕರುವ ಕಟ್ಟುವಲ್ಲಿ ಗೊತ್ತ ಕಂಡು ದನವ ಕಾವಲ್ಲಿ ಸಜ್ಜನನಾಗಿ, ಜೀವಧನವ ಕಂಡಲ್ಲಿ ಮನ ಮುಟ್ಟದೆ, ಇಂತೀ ಭೇದೇಂದ್ರಿಯಂಗಳ ತುರುಮಂದೆಯಲ್ಲಿ ಕರು ಕಡಸು ಎತ್ತು ಹಸುವಿನಲ್ಲಿ ಚಿತ್ರದ ವರ್ಣವನರಿಯಬೇಕು ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ.