Index   ವಚನ - 42    Search  
 
ಹಸುವಿಂಗೆ ಆರು ಬಾಯಿ, ಎತ್ತಿಂಗೆ ಮೂರು ಬಾಯಿ ಕರುವಿಂಗೆ ಒಂದು ಬಾಯಲ್ಲಿ ನಾನಾವರ್ಣದ ಹುಲ್ಲ ಮೇದು ನೀರಡಸಿ ನೆಟ್ಟಾಲಿ ನಿಂದುವು ಕಣ್ಣು. ಕರು ಸತ್ತ ಮತ್ತೆ ಹಸುವಿನ ಹಂಗಿಲ್ಲ. ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ ಕರುವಿನ ಹರಣ ಹೋಹುದಕ್ಕೆ ಮುನ್ನವೆ ಒಡಗೂಡಿ ಶುದ್ಧಿಯನೊಪ್ಪಿಸಬೇಕು.