Index   ವಚನ - 4    Search  
 
ತಲೆಯ ಮೇಲೆ ತಲೆಯುಂಟೆ? ಗಳದಲ್ಲಿ ವಿಷವುಂಟೆ? ಹಣೆಯಲ್ಲಿ ಕಣ್ಣುಂಟೆ? ದೇವರೆಂಬವರಿಗೆಂಟೊಡಲುಂಟೆ? ತಂದೆ ಇಲ್ಲದವರುಂಟೆ? ತಾಯಿ ಇಲ್ಲದವರುಂಟೆ? ಎಲೊ! ನಿನ್ನ ನೊಸಲಲ್ಲಿ ನೇಸರು ಮೂಡದೆ? ಶಂಭು ತೆಲುಗೇಶ್ವರಾ, ನಿನಗಲ್ಲದುಳಿದ ದೈವಂಗಳಿಗುಂಟೆ ಕಾಲೊಳು ಕಣ್ಣು?