Index   ವಚನ - 1    Search  
 
ಪೂರ್ವಕರ್ಮವ ಕೆಡಸಿದನೆನ್ನ ಗುರು ಉಭಯ ಕರ್ಮವ ಬಿಡಿಸಿ ತೋರಿದ ಶರಣರ. ಅವರಿಂದ ಬದುಕಿದೆನು. ತೋರಿದ ಸದುಭಕ್ತರ; ಅವರಿಂದ ಬದುಕಿದೆನು. ನಾಚಯ್ಯಪ್ರಿಯ ಮಲ್ಲಿನಾಥಯ್ಯಾ, ಗುರುವಿಂದ ಬದುಕಿದೆನು, ನಿಮ್ಮ ಹಂಗೇನು?