Index   ವಚನ - 3    Search  
 
ಎಲು ನರ ಚರ್ಮ ಮಜ್ಜೆ ಮಾಂಸದೊಳಗಾದ ಕ್ರಿಮಿ ಎನ್ನಂಗದೊಳು ಹುಟ್ಟಿ, ಮಲ ಹುಣ್ಣು ಉಗುಳುಗಳಲ್ಲಿ ಬೀಳುವುದ ಕಂಡು ಅವ ನಾ ರಕ್ಷಿಸಿದೆನೆ ? ಅವು ಬೀಳಬೇಕೆಂದು ನಾ ಶಿಕ್ಷಿಸಿದೆನೆ ? ಇಂತೀ ಜೀವದ ದೃಷ್ಟವ ಕಂಡು ಎನಗಿದೆತ್ತಣ ಸರ್ವ ಜೀವದಯ ಈ ರಕ್ತದ ಲೇಪವ ಬಿಡಿಸಾ, ಕಲ್ಲು ಮಣ್ಣು ಮರನಂತೆ ಚೆನ್ನ ದಸರೇಶ್ವರಲಿಂಗಾ.