•  
  •  
  •  
  •  
Index   ವಚನ - 479    Search  
 
ದಾರಿಗೊಂಡು ಹೋಹವರೆಲ್ಲರೂ ನೀವು ಕೇಳಿರೆ. ಮೂರು ಬಟ್ಟೆ ಕೂಡಿದ ಠಾವಿನಲ್ಲಿ ಒಬ್ಬ ಹೆಮ್ಮಾರಿ ಐದಾಳೆ. ಆ ಮಾರಿಯ ಬಾಯೊಳಗೆ ಮೂರು ಘಟ್ಟಗಳಿಪ್ಪುವು. ನಂಜಿನ ಸೋನೆ ಸುರಿವುತ್ತಿಪ್ಪುದು. ಕಾಡ ಕೋಣನ ಮುಖದಲ್ಲಿ ಕತ್ತಲೆ ಕಾಣಲೀಸದು. ಐದು ಬಾಯ ಹುಲಿ ಆಗುಳಿಸುತ್ತಿಪ್ಪುದು. ಇವೆಲ್ಲವ ಗೆದ್ದಲ್ಲದೆ ಗುಹೇಶ್ವರನ ಕಾಣಬಾರದು ನೋಡಿರಣ್ಣಾ.
Transliteration Dārigoṇḍu hōhavarellarū nīvu kēḷire. Mūru baṭṭe kūḍida ṭhāvinalli obba hem'māri aidāḷe. Ā māriya bāyoḷage mūru ghaṭṭagaḷippuvu. Nan̄jina sōne surivuttippudu. Kāḍa kōṇana mukhadalli kattale kāṇalīsadu. Aidu bāya huli āguḷisuttippudu. Ivellava geddallade guhēśvarana kāṇabāradu nōḍiraṇṇā.
Hindi Translation मार्ग पर चलनेवाले तुम सुनिये। तीन रास्ते मिलने की जगह पर एक महामारी है। उस महामारी के मुँह में तीन घट हैं। जहर का रस टपक रहा है। जंगली भैंसा के मुँह में अंधकार फैला है। पाँच मुँह का बाघ डरा रहा है। इन सबको जीते बिना गुहेश्वर न दीखता। Translated by: Eswara Sharma M and Govindarao B N
Tamil Translation சாதனைப் பாதையில் செல்வோரே, நீவிர் கேண்மின் மூவழிகள் இணையுமிடத்தில் மாயை உள்ளாள். மாயையின் வாயிலே மூன்று குடங்கள் உள்ளன. நஞ்சின் சாறு சொரிகிறது. காட்டு எருமையின் முகத்திலுள்ள இருள் காணவிடாது ஐந்து வாய்ப்புலி வாயைத் திறந்து கொண்டிருந்தது. இவ்வனைத்தையும் வென்றாலன்றி குஹேசுவரனை உணரவியலுமோ? Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಗುಳಿಸು = ಆ ಎಂದು ಬಾಯಿತೆರೆದಿರು, ಪಥಿಕರನು ನುಂಗಿಹಾಕುವಂತೆ ಜೃಂಭಿಸು; ಇವೆಲ್ಲವು = ಮಾಯೆ ಹಾಗೂ ಅದರ ವಿವಿಧ ರೂಪಗಳು; ಐದಾಳೆ ಐದು = ಅಡಗಿಕೊಂಡಿರು, ವಾಸಮಾಡು.; ಐವಾಯ = ಐದು ಬಾಯಿಯ, ಐದು ವಿಕಾರಗಳನ್ನುಂಟುಮಾಡುವ; ಕತ್ತಲೆ = ಆ ಅಹಂಕಾರಭಾವದೊಳಗೆಲ್ಲ ತುಂಬಿಕೊಂಡಿರುವುದು ಅಜ್ಞಾನವೆಂಬ ಕತ್ತಲೆ; ಕಾಡಕೋಣ = ಗರ್ವ, ಅಹಂಕಾರ, ಜಡವಸ್ತುವಿಷಯಕ ಮದ, ; ಕಾಣಬಾರದು = ದೇವನನು ಸಾಕ್ಷಾತ್ಕರಿಸಿಕೊಳ್ಳಲಾಗದು.; ಕಾಣಲೀಸದು = ಸಾಧ್ಯ ಹಾಗೂ ಸಾಧನಾಪಥಗಳನ್ನು ಕಾಣಬರದಂತೆ ಮಾಡುವುದು; ಕೂಡಿದ ಠಾವು = ಆ ಮಾರ್ಗಗಳೆಲ್ಲ ಹೊಂದಿ ಸಾಗುವ ಸ್ಥಾನ; ಮನಸ್ಸು, ಅಂತಃಕರಣ; ಗೆಲ್ಲು = ಈಡಾಡು; ದಾರಿ = ಸಾಧನಾಪಥ; ನಂಜಿನ ಸೊನೆ = ವಿಷದ ರಸ, ವಿಷಯರಸ; ಮಾರಿ = ಮಾರಕಳಾದ ಮಾಯೆ, ಜೀವನನ್ನು ಕಾಲ-ಕರ್ಮಗಳ ಪ್ರವಾಹಕ್ಕೆ ದೂಡುವ ಶಕ್ತಿ; ಮೂರು ಘಟ = ಕಾಮಪ್ರೇರಕವಾದ ಸ್ರೀ-ಪುರುಷ, ಲೋಭಪ್ರೇರಕವಾದ ಸಿರಿ-ಸಂಘದ, ಅಹಂಪ್ರೇರಕವಾದ ಅಧಿಕಾರ-ಕೀರ್ತಿ; ಮೂರು ಬಟ್ಟೆ = ಕರ್ಮಮಾರ್ಗ, ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗ; ಹುಲಿ = ಕಾಲವ್ಯಾಘ್ರ; ಹೆಮ್ಮಾರಿ = ಮಹಾಮಾಯೆ, ಮುಕ್ತಿವಿರೋಧಿಯಾದ ಮಾರಕ ಶಕ್ತಿ; Written by: Sri Siddeswara Swamiji, Vijayapura