Index   ವಚನ - 30    Search  
 
ಕುಂಭದಲ್ಲಿ ಬೆಂದ ಅಶನಕ್ಕೆ ಒಂದಗುಳಲ್ಲದೆ ಹಿಂಗಿ ಹಿಂಗಿ ಹಿಸುಕಲುಂಟೆ? ಗುರುತಪ್ಪುಕನ ಲಿಂಗಬಾಹ್ಯನ ಜಂಗಮನಿಂದಕನ ಆಚಾರಭ್ರಷ್ಟನ ಜ್ಞಾನಹೀನನ ಅರಿತು ಕಂಡು ಕೂಡಿದಡೆ, ತನ್ನವನೆಂದು ಅಂಗೀಕರಿಸಿದಡೆ, ಖಂಡವ ಬಿಟ್ಟು ಮತ್ಸ್ಯಕ್ಕೆ ಹರಿದ ಜಂಬುಕನಂತೆ ಆಗದೆ? ಸದಾಚಾರದಲ್ಲಿ ಸಂದಿರಬೇಕು. ಕಟ್ಟಾಚಾರದಲ್ಲಿ ನಿಂದಿರಬೇಕು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.