Index   ವಚನ - 31    Search  
 
ಕುಸುಮ ಕ್ರೀ ಗಂಧ ನಿಃಕ್ರೀಯೆಂದಲ್ಲಿ ಕುಸುಮವನಗಲಲಿಕ್ಕಾಗಿ ಒಡಗೂಡಿದ ಗಂಧ ಹಸುಕಾಗದೆ? ಗಂಧ ಸ್ವಯಂಭುವಾದಡೆ ಕುಸುಮವ ಹಿಸುಕಿದಲ್ಲಿಯೇ ಒಡಲುಗೊಂಡುದು ನೊಂದಿತ್ತೆಂದು ತಾ ಸ್ವಯವಾಗಿ ಎಂದಿನಂತಿದ್ದಿತ್ತೆ? ಇದು ಕ್ರೀಜ್ಞಾನ ಭೇಧ, ಸ್ವಾನುಭಾವ ಶುದ್ಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.