Index   ವಚನ - 32    Search  
 
ಗಂಧವ ಬಂಧಿಸಿ ಹಿಡಿದೆಹೆನೆಂದಡೆ ಆ ಗಂಧದ ಅಂಗವಿಲ್ಲದೆ ನಿಂದುದುಂಟೆ ಸುಗಂಧ? ಈ ಶಿವಲಿಂಗವನರಿಯದ ಆತ್ಮನು ಮುಂದೆ ಏತರಿಂದ ಸಂಧಿಸುವುದು? ಇದು ಲಿಂಗಾಂಗಿಯ ಸಾವಧಾನ ಸಂಬಂಧ. ನಿಳಯದ ಬಾಗಿಲು ತಿಳುವಳ. ಲಿಂಗಮೂರ್ತಿಯ ತದ್ಧ್ಯಾನ ಶುದ್ಧ ಲೇಪವಾದುದು ತತ್ಕಾಲ ಸಂಬಂಧಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.