Index   ವಚನ - 52    Search  
 
ನಸುಗಾಯವಡೆದವನಂತೆ ನೋವುಣ್ಣದೆ, ಸತ್ರ್ಕೀವಂತನಂತೆ ಸಂದೇಹವಿಲ್ಲದೆ, ಖಳನಿಚ್ಚಟನಂತೆ ಆತ್ಮಕ್ಕೆ ಸಂದು ಸಂಶಯವಿಲ್ಲದೆ, ನೆರೆ ಅರಿದವನಂತೆ ಮರವೆಯ ಕುರುಹಿಗೆ ಬಾರದೆ, ಲಿಂಗದಲ್ಲಿ ಕರಿಗೊಂಡವನಂತೆ ಕೊಟ್ಟಿಹೆ ಕೊಂಡೆಹೆನೆಂಬ ಸೂತಕವಿಲ್ಲದೆ, ಬೊಮ್ಮವನರಿದವನಂತೆ ಅವರಿವರಲ್ಲಿ ಸುಮ್ಮಾನದ ಸುಖವ ನುಡಿಯದೆ, ಘಟಕರ್ಮ ಯೋಗಿಯಂತೆ ಆ ದೇಹ ಇಂದ್ರಿಯಂಗಳಿಲ್ಲದೆ, ಲಿಂಗಸಂಗಿಯಂತೆ ಭಾವಸರ್ವರ ಸಂಗ ಮಾಡದೆ ಇಂತೀ ಸರ್ವಗುಣಸಂಪನ್ನ ನವಬ್ರಹ್ಮಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.