Index   ವಚನ - 53    Search  
 
ನಾ ನೀನೆಂಬನ್ನಕ್ಕ ಕ್ರೀಯ ಮಾಡುತ್ತಿರಬೇಕು. ನಾನೀನೆಂಬುದಳಿದ ಮತ್ತೆಅದು ಅವಿರಳ ಸ್ವರೂಪು; ನಾಮ ಶೂನ್ಯ ನಾಸ್ತಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.