Index   ವಚನ - 76    Search  
 
ಮುತ್ತಿನ ನೀರಿನಂತೆ, ರತ್ನದ ಬೆಂಕಿಯಂತೆ, ಸುರಚಾಪದಂತೆ, ಶರಧಿಯ ಹೊಳೆಯಂತೆ, ವರವಳಿದ ಶಿಲಾಮೂರ್ತಿಯಂತೆ, ದೃಷ್ಟವಿದ್ದು ನಷ್ಟವಪ್ಪುದು ನಿಜ ನಿಷ್ಠೆವಂತನ ಸಾವಧಾನ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.