Index   ವಚನ - 78    Search  
 
ಮೆಟ್ಟಿದ ಪಂಕವ ಅಪ್ಪುವಿನಿಂದಲ್ಲದೆ ನೀಗಬಾರದು. ಮಾಡುವ ಕ್ರೀಯ ಅರಿವಿನ ದೆಸೆಯಿಂದಲ್ಲದೆ ಬಿಡುಮುಡಿಯನರಿಯಬಾರದು. ಮಹಾನಿಜತತ್ವದ ಬೆಳಗ ಮಹಾಶರಣ ಸಂಸರ್ಗದಲ್ಲಿ ಅಲ್ಲದೆ ಅರಿದು ಹರಿಯಬಾರದು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.