ಯೋಗವೆಂಬುದೇನು ಲಕ್ಷ್ಯದೊಳಗೆ ಅಲಕ್ಷ್ಯವಡಗಿಪ್ಪುದು;
ಇಷ್ಟದಲ್ಲಿ ಅಭೀಷ್ಟವಡಗಿಪ್ಪುದು; ಸ್ಥೂಲದಲ್ಲಿ ಸೂಕ್ಷ್ಮವಡಗಿಪ್ಪುದು;
ಅರಿದಲ್ಲಿ ಆ ಅರಿಕೆ ಅಡಗಿಪ್ಪುದು, ವಸ್ತುಕದಲ್ಲಿ ಆ ವಸ್ತು ಅಡಗಿ,
ರಂಜನೆಯಲ್ಲಿ ನಿರಂಜನ ಕುರುಹುಗೊಂಡು.
ಆ ರಂಜನೆ ರಂಜಿಸುವಂತೆ,
ತಾನರಿವ ಕುರುಹಿನಲ್ಲಿ ನಿಜದರಿವು ಕರಿಗೊಂಡು
ಇಷ್ಟಲಿಂಗಕ್ಕೆ ದೃಷ್ಟಾತ್ಮಲೇಪವಾಗಿ ಇದು ಕ್ರಿಯಾ ಲಿಂಗಾಂಗಯೋಗ.
ನಿಜವನರಿಯದೆ ಕುಟಿಲ ಘಟಂಗಳಿಂದ ಅಂಬಿಕಾ ಹಠ
ಘಟಯೋಗಿಗಳೆಲ್ಲರು ಭವಸಾಗರದ ಸಟೆಯೋಗಿಗಳು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
Art
Manuscript
Music
Courtesy:
Transliteration
Yōgavembudēnu lakṣyadoḷage alakṣyavaḍagippudu;
iṣṭadalli abhīṣṭavaḍagippudu; sthūladalli sūkṣmavaḍagippudu;
aridalli ā arike aḍagippudu, vastukadalli ā vastu aḍagi,
ran̄janeyalli niran̄jana kuruhugoṇḍu.
Ā ran̄jane ran̄jisuvante,
tānariva kuruhinalli nijadarivu karigoṇḍu
iṣṭaliṅgakke dr̥ṣṭātmalēpavāgi idu kriyā liṅgāṅgayōga.
Nijavanariyade kuṭila ghaṭaṅgaḷinda ambikā haṭha
ghaṭayōgigaḷellaru bhavasāgarada saṭeyōgigaḷu.
Śambhuvininditta svayambhuvinindatta atibaḷa nōḍā,
mātuḷaṅga madhukēśvaranu.