Index   ವಚನ - 80    Search  
 
ಲಿಂಗಕ್ಕೆ ನೈವೇದ್ಯ ಸಕಲ ಪದಾರ್ಥ ಬಂದಿರಲಿಕ್ಕಾಗಿ ಕಂಗಳು ತುಂಬಿ ನೋಡಿ ಕೈ ತುಂಬ ಮುಟ್ಟಿ, ಲಿಂಗಾರ್ಪಿತಕ್ಕೆ ಮೊದಲೆ ಕ್ಷುಧೆಯಾವರಿಸಿ ಮನ ನೆಟ್ಟಿತ್ತಾದಡೆ, ಆ ಗುಣ ಲಿಂಗಾರ್ಪಿತವಲ್ಲ, ಕ್ರೀಗೆ ಸಲ್ಲ, ಪ್ರಮಥರೊಳಗಲ್ಲ, ಪ್ರಸನ್ನನೊಪ್ಪ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.