Index   ವಚನ - 91    Search  
 
ಸಂಚದ ಸರಾಗದಂತೆ, ಮಿಂಚಿನ ಕುಡಿವೆಳಗಿನ ಸಂಚಾರದಂತೆ, ಉರಿಯ ನಾಲಗೆಯ ದ್ರವದ ತರಂಗದಂತೆ, ಪನ್ನಗನ ಜಿಹ್ವೆಯ ನಿಳಿವಳಿಯಂತೆ, ಚಮತ್ಕಾರದ ಅಸಿಯ ಗುಣಮೊನೆಯಂತೆ, ಅಶ್ವಪರ್ಣದ ಅಗ್ರದ ಬಿಂದುವಿನ ಅಂದದಾತ್ಮನ ತಿಳಿದು, ಸರ್ವೇಂದ್ರಿಯದಲ್ಲಿ ಮುಂಚುವುದಕ್ಕೆ ಮುನ್ನವೆ ಆತ್ಮನ ಉಚಿತವನರಿದು, ರಸ ಬೆಂಕಿಯಲ್ಲಿ ಬೆರೆದಂತಾಗಬೇಕು; ಈ ಗುಣ ಸಾವಧಾನಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.