Index   ವಚನ - 93    Search  
 
ಸರ್ಪ ಮುಟ್ಟಿದಡೇನು ವಿಷ ತಪ್ಪಿದ ಮತ್ತೆ? ಲೌಕಿಕಿ ವರ್ತನವಾದಡೇನು ಚಿತ್ತ ವಸ್ತುವಿನಲ್ಲಿ ಮುಟ್ಟಿದ ಮತ್ತೆ? ತ್ರಿವಿಧವ ಮುಟ್ಟಿ ಪೂಜಿಸಿದಡೇನು ತ್ರಿವಿಧ ಮಲತ್ರಯಕ್ಕೆ ಕಚ್ಚಿ ಕಡಿದಾಡಿದ ಮತ್ತೆ? ಮಾತಿನ ಮಾಲೆಯಿಂದ ದ್ವೈತಾದ್ವೈತಂಗಳ ಎಷ್ಟು ನುಡಿದಡೇನು ಚಿತ್ತ ವಸ್ತುವಿನಲ್ಲಿ ನಿಹಿತವಿಲ್ಲದೆ ಮತ್ತೆ? ಇಂತಿವನರಿತು ಗುರುಕರಜಾತನಾದವಂಗೆ ಕರ್ತೃಭೃತ್ಯನೆಂಬ ಸೂತಕದ ಸುಳುಹಿಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.