Index   ವಚನ - 94    Search  
 
ಸರ್ವಾಂಗಲಿಂಗ ವ್ಯವಧಾನಿ ಎಂದು ಆತ್ಮಂಗೆ ಕಟ್ಟಮಾಡಿ, ಒಟ್ಟಾದ ತಿರುಗಿ ಮುಟ್ಟಿಹೆನೆನಬಹುದೆ? ಮತ್ತೆ ಮನಸೋತು ಮುಟ್ಟುವುದು ವಿಷಯವೊ? ನಿರ್ವಿಷಯವೊ? ಹೆಣ್ಣ ಹಿಡಿದಲ್ಲಿ ವಿಷಯ ವ್ಯಾಪಾರನಾಗಿ ಹೊನ್ನ ಹಿಡಿದಲ್ಲಿ ಸತಿ-ಸುತ ಸಕಲ ಸುಖಂಗಳಿಗೆ ಈಡೆಂದು ಅಂಡಿನ ಅಂಡಕ್ಕೆ ಹಾಕುತ್ತ, ಮಣ್ಣ ಹಿಡಿದಲ್ಲಿ ಅರೆ ಅಡಿಗಾಗಿ ಕಡಿದಾಡುತ್ತ ಆ ತೆರ ಅರಿಕೆಗೊಡಲುಂಟೆ? ಉನ್ಮತ್ತಂಗೆ ತನ್ನ ನುಡಿ ಸಸಿನವಲ್ಲದೆ ಸನ್ಮತಗುಂಟೆ ಮರವೆಯ ತೆರ? ಬಿಟ್ಟುದು ಹಿಡಿದೆನೆಂಬ ನಾಚಿಕೆ ತೋರದೆ, ದುಷ್ಟ ಜೀವವ ನೋಡಾ? ಅದು ನುಡಿಗೆಡೆಗಂಜದು, ಪುಡಿಪುಚ್ಚವಿಲ್ಲ, ಅವರ ಒಡಗೂಡಲಿಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.