Index   ವಚನ - 95    Search  
 
ಸಹಪಂತಿಯಲ್ಲಿ ಗುರುಚರವಿರುತಿರಲಿಕ್ಕಾಗಿ ತನ್ನ ಗುರುವೆಂದು ಮುಂದಿದ್ದ ಪ್ರಸಾದವ ಬಿಟ್ಟು ಕೈವೊಡ್ಡಿ ಕೊಂಡಡೆ, ವಿಚಾರವಿಲ್ಲದೆ ಕೊಟ್ಟಡೆ, ಆ ಗುರುವಿಂಗೆ ಗುರುವಿಲ್ಲ, ಅವನಿಗೆ ಪ್ರಸಾದವಿಲ್ಲ. ಮುಂದೆ ಇದಿರಿಟ್ಟು ತೋರಿದನಾಗಿ ಎಲ್ಲಿಯೂ ನಾನೆ ಎಂದಲ್ಲಿ ಗುರುಸ್ಥಲ. ಅಲ್ಲಿ ಪರಿಪೂರ್ಣನಾಗಿಪ್ಪನು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.