Index   ವಚನ - 101    Search  
 
ಪ್ರಮಾಣವ ಪ್ರಮಾಣಿಸಿದಲ್ಲಿ ತಪ್ಪದಿಪ್ಪೆ. ಅಪ್ರಮಾಣ ಅಗೋಚರವೆಂದಡೆ ಅತ್ಯತಿಷ್ಠದ್ದಶಾಂಗುಲನಾಗಿಪ್ಪೆ. ಪೂರ್ವಕ್ಕೆ ಭಾವಜ್ಞನಾಗಿ, ಉತ್ತರಕ್ಕೆ ತೊಟ್ಟುಬಿಟ್ಟು ಹಣ್ಣಿನಂತೆ ನಿಶ್ಚಯನಾಗಿಪ್ಪೆ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.