•  
  •  
  •  
  •  
Index   ವಚನ - 490    Search  
 
ಹೊನ್ನ ತೂಗಿದ ತ್ರಾಸುಕಟ್ಟಳೆ ಹೊನ್ನಿಂಗೆ ಸರಿಯುಪ್ಪುದೆ? ಸನ್ನಿಹಿತರಾದೆವೆಂಬ ನುಡಿಗೆ ನಾಚರು ನೋಡಾ. ಕನ್ನದಲಿ ಸವೆದ ಕಬ್ಬುನದಂತೆ, ಮುನ್ನ ಹೋದ ಹಿರಿಯರು ಲಿಂಗದ ಸುದ್ದಿಯನರಿಯರು. ಇನ್ನಾರು ಬಲ್ಲರು ಹೇಳಾ ಗುಹೇಶ್ವರಾ?
Transliteration Honna tūgida trāsukaṭṭaḷe honniṅge sariyuppude? Sannihitarādevemba nuḍige nācaru nōḍā. Kannadali saveda kabbunadante, munna hōda hiriyaru liṅgada suddiyanariyaru. Innāru ballaru hēḷā guhēśvarā?
Hindi Translation क्या सोना तोलनेवाला तराजू का पत्थर सोने का बराबर होता है ? सन्निहित हुए कहने से लजाते नहीं देखो। सेंद में घिसे लोहे जैसे पहले गये बुजुर्ग लिंग ज्ञान नहीं जानते। और कौन जानता है कहो गुहेश्वरा ? Translated by: Eswara Sharma M and Govindarao B N
Tamil Translation பொன்னை சீர்தூக்கும் எடைக்கல் பொன்னிற்கு ஈடாகுமோ? ஒருமித்தேன் எனும் சொல்லிற்கு நாணுவதில்லை காணாய் கன்னமிடுகையில் தேய்ந்த இரும்பைப்போல முன்பு வாழ்ந்த பெரியோர் சிவானுபவ மெய்தவில்லை வல்லவர் யாரோ? கூறுவாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕನ್ನದಲಿ ಸವೆದ ಕಬ್ಬು = ಕನ್ನ ಕೊರೆಯುವಲ್ಲಿ ಸವೆದುಹೋದ ಕಬ್ಬಿಣದ ಉಪಕರಣ; ತ್ರಾಸುಕಟ್ಟಳೆ = ತಕ್ಕಡಿಯೊಳಗಿರುವ ತೂಗುವ ಕಲ್ಲು; ಮುನ್ನ ಹೋದ ಹಿರಿಯರು = ಪೂರ್ವಕಾಲದಲ್ಲಿ ಆಗಿಹೋದ ಭಿನ್ನಭಕ್ತಿಯ ಹಿರಿಯರು; ಲಿಂಗದ ಸುದ್ದಿ = ಎಲ್ಲವೂ ಲಿಂಗ, ತಾನೂ ಲಿಂಗ-ಎಂಬ ಪವಿತ್ರ ಜ್ಞಾನ; ಸನ್ನಹಿತರಾಗು = ಒಡಗೂಡಿ ನಿಲ್ಲು, ಲಿಂಗದೊಂದಿಗೆ ಒಂದಾಗು, ಲಿಂಗಾನುಭಾವಿಗಳಾಗು.; Written by: Sri Siddeswara Swamiji, Vijayapura