Index   ವಚನ - 42    Search  
 
ಗುರುವಿನಲ್ಲಿ ಗುಣವಿಲ್ಲದಿರ್ದಡೆ ಪೂಜ್ಯನಾಗಿ ಪೊಡವಡಿಸಿಕೊಳಲೇಕೆ? ಲಿಂಗದಲ್ಲಿ ಲಕ್ಷಣವಿಲ್ಲದಿರ್ದಡೆ ತ್ರಿಸಂಧ್ಯಾಕಾಲದಲ್ಲಿ ಪೂಜಿಸಿಕೊಳಲೇಕೆ? ಜಂಗಮದಲ್ಲಿ ಜಾತಿಯಿಲ್ಲದಿರ್ದಡೆ ಹಿರಿದು ಕಿರಿದೆಂದು ಹೋರಲೇಕೆ? ಇದನೇನ ಹೇಳುವೆ? ಗುರು ಭವಕ್ಕೊಳಗಾದ, ಲಿಂಗ ಲಕ್ಷಣಕ್ಕೊಳಗಾಯಿತ್ತು. ಜಂಗಮ ಜಾತಿಗೊಳಗಾದ! ಇವನೆಲ್ಲವ ಹೇಳಿ ಹೇಳಿ: ಎನಗಿದು ಒಳ್ಳಿತ್ತೊ ಹೊಲ್ಲವೊ? ಗೆಲ್ಲತನಬೇಡ, ಆತುರವೈರಿ ಮಾರೇಶ್ವರಾ.