ನಾದದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು, ಎಲೆ ಮರುಳೆ!
ಬಿಂದು ದಳದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು ಎಲೆ ಮರುಳೆ!
ಮಧ್ಯದಳದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು ಎಲೆ ಮರುಳೆ!
ಮುಗಿಲಗಲದ ಅಂಬರ ವಾಯು
ಅಗ್ನಿಜಲ ಧರೆಯ ಹೊತ್ತುಕೊಂಡು
ಅವ, ಹೇಳಿದಡೇನು ಕೇಳಿದಡೇನು ಎಲೆ ಮರುಳೆ!
ಗುಹೇಶ್ವರಲಿಂಗದ ಬಾರಿಗೊಳಗಾಗಿ,
ಇವೆಲ್ಲವನುಂಟುಮಾಡಲರಿಯೆನಾಗಿ
ಎನಗಿಲ್ಲವೆನುತಿರ್ದೆನಯ್ಯಾ.
Transliteration Nādada utpatti sthiti layavanu
hēḷidaḍēnu kēḷidaḍēnu, ele maruḷe!
Bindu daḷada utpatti sthiti layavanu
hēḷidaḍēnu kēḷidaḍēnu ele maruḷe!
Madhyadaḷada utpatti sthiti layavanu
hēḷidaḍēnu kēḷidaḍēnu ele maruḷe!
Mugilagalada ambara vāyu
agnijala dhareya hottukoṇḍu
ava, hēḷidaḍēnu kēḷidaḍēnu ele maruḷe!
Guhēśvaraliṅgada bārigoḷagāgi,
ivellavanuṇṭumāḍalariyenāgi
enagillavenutirdenayyā.
Hindi Translation नाद उत्पत्ति-स्थिति-लय को
कहें तो क्या, सुने तो क्या, अरे बावले।
बिंदु जल उत्पत्ति-स्थिति-लय को
कहेंतो क्या, सुने तो क्या अरे बावले।
मध्य दल उत्पत्ति-स्थिति-लय को
कहें तो क्या, सुनेतो क्या अरे बावले।
आसमान जैसे विशाल अंबर-वायु-अग्नि-जल-धरा धारण कर
कहें तो क्या, सुने तो क्या, अरे बावले।
गुहेश्वर लिंग बारी बारी में
इन सब बातों को न जानने के कारण
मुझे मालूम नहीं कहता हूँ।
Translated by: Eswara Sharma M and Govindarao B N
Tamil Translation நாதத்தின் தோற்றம், இருப்பு ஒடுக்கத்தைக்
கூறினாலென்ன, கேட்டாலென்ன மருளே!
பிந்துதளத்தின் தோற்றம் இருப்பு ஒடுக்கத்தைக்
கூறினாலென்ன, கேட்டாலென்ன, மருளே!
நடுத்தளத்தின் தோற்றம், இருப்பு, ஒடுக்கத்தைக்
கூறினாலென்ன, கேட்டாலென்ன, மருளே!
பரந்த ஆகாயம், வாயு, தீ, நீர், நிலத்தைச் சுமந்து கொண்டு
எதைக் கூறினாலென்ன, கேட்டாலென்ன மருளே!
குஹேசுவரலிங்கத்துடன் ஒருமித்து
இவற்றை விவரிக்கும் கலையை அறியாததால்
வாழ்க்கைப் பிணைப்பு எனக்கில்லை ஐயனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿಯೆನಾಗಿ = ಆ ನಾದಾದಿಗಳನು ಸೃಜಿಸುವ, ಅವುಗಳ ಸ್ವರೂಪವನು ವಿವರಿಸುವ ಕಲೆಯನು ತಿಳಿಯೆನಾಗಿ; ಇವೆಲ್ಲವನು = ಈ ನಾದಾದಿಗಳನು; ಉಂಟುಮಾಡು = ಸೃಜಿಸು, ಅರಿತಿಕೊ; ಎನಗಿಲ್ಲ = ಸಾಂಸಾರಿಕ ಬಂಧನ ಎನಗೆ ಇಲ್ಲ; ನಾದ = ವಿಶ್ವದ ಪರಮಕಾರಣ ತತ್ತ್ವ.; ಬಾರಿಗೆ ಒಳಗಾಗು = ಅಧೀನವಾಗು, ಒಂದುಗೂಡಿ ಹೋಗು; ಬಿಂದು ದಳ = ಬಿಂದು ತತ್ತ್ವ, ವಿಶ್ವದ ಕಾರಣ ತತ್ವ್ತ; ಮಧ್ಯ ದಳ = ಕಲಾ ತತ್ತ್ವ, ದೃಶ್ಯವಾದ ತತ್ತ್ವ ಸಮೂಹದಿಂದ ಕೂಡಿದ ವಿಶ್ವ; ಮರುಳ = ಆತ್ಮವನು ಅರಿಯದವ; ಮುಗಿಲದಗಲದ = ವಿಶಾಲವಾದ; ಹೊತ್ತುಕೊಳ್ಳು = ಅಭಿಮಾನ ತಾಳು, ವ್ಯಾಮೋಹಕ್ಕೆ ಒಳಗಾಗು;
Written by: Sri Siddeswara Swamiji, Vijayapura