Index   ವಚನ - 74    Search  
 
ಭಕ್ತಿಯೆಂಬ ಭಾಂಡದಲ್ಲಿ ಸತ್ಯವೆಂಬ ಅಕ್ಕಿಯ ಹೊಯಿದು ನಿರ್ಮಲವೆಂಬ ಉದಕವ ಸಂಬಂಧಿಸಿ ತ್ರಿಗುಣವೆಂಬ ಮೂರು ಒಲೆಯ ಗುಂಡು ಆತುರದ ಸೌದೆ, ಸುಡದ ಬೆಂಕಿಯಲ್ಲಿ ಉರುಹಲಾಗಿ, ಓಗರ ಬೆಂದಿತ್ತು, ಇಕ್ಕುವರಿಲ್ಲ, ಉಂಬವರ ಕಾಣೆ, ಆತುರವೈರಿ ಮಾರೇಶ್ವರಾ.