Index   ವಚನ - 97    Search  
 
ಹೆಣ್ಣಿನ ಮೇಲಿನ ಮೋಹ ಯೋನಿ ಕಂಡಾಗ ದಣಿಯಿತ್ತು. ಹೊನ್ನಿನ ಮೇಲಿನ ಮೋಹ ಕೂಡಿ ಭಿನ್ನವಾಗಲಾಗಿಯೆ ದಣಿಯಿತ್ತು. ಮಣ್ಣಿನ ಮೇಲಿನ ಮೋಹ ಅರಿಗಳ ಮುರಿದು ಹರವರಿಯಾದಾಗಲೇ ದಣಿಯಿತ್ತು. ಇವನೊಂದುವ ಕಾಣದ ಮೋಹ ಎಂದಿಗೂ ಬಿಡದು. ಇದರ ಸಂದನಳಿದು ಹೇಳಾ, ಆತುರವೈರಿ ಮಾರೇಶ್ವರಾ.