Index   ವಚನ - 13    Search  
 
ಭಕ್ತನಾದಡೆ ಜಂಗಮದಡಕದಲ್ಲಿ ಸಂದಿರಬೇಕು. ಜಂಗಮವಾದಡೆ ಭಕ್ತನ ಕೈಯ ತತ್ತಲಗೂಸಿನಂತಿರಬೇಕು. ಇದಲ್ಲದೆ, ಭಕ್ತನೂ ನಾ (ನೆ ಜಂಗ) ಮವೂ ನಾನೆ ಎಂದಡಾ ಇಬ್ಬರಿಗೂ ದಾರಿಯ ಕೊಡಲೊಲ್ಲೆ ಕಾಣಾ, ಆನಂದ ನಿಜಗುಣಯೋಗಿ.