ತತ್ತ್ವವೆಂಬುದ ನೀನೆತ್ತ ಬಲ್ಲೆಯೊ?
ಸತ್ತು ಮುಂದೆ ನೀನೇನ ಕಾಬೆಯೊ?
ಇಂದೆ ಇಂದೆಯೊ ಇಂದೆ, ಮಾನವಾ.
ಮಾತಿನಂತಿಲ್ಲ ಶಿವಾಚಾರ,
ದಸರಿದೊಡಕು ಕಾಣಿರಣ್ಣಾ.
ರಚ್ಚೆಯ ಮಾತಲ್ಲ ಬೀದಿಯ ಮಾತಲ್ಲ.
ಏಕೊ ರಾತ್ರಿಯ ಬಿಂದು ನೋಡಾ!
ಗುಹೇಶ್ವರನ ಕೂಡಿದ ಕೂಟ
ಇಂದು ಸುಖ, ಮುಂದೆ ಲೇಸು.
Transliteration Tattvavembuda nīnetta balleyo?
Sattu munde nīnēna kābeyo?
Inde indeyo inde, mānavā.
Mātinantilla śivācāra,
dasaridoḍaku kāṇiraṇṇā.
Racceya mātalla bīdiya mātalla.
Ēko rātriya bindu nōḍā!
Guhēśvarana kūḍida kūṭa
indu sukha, munde lēsu.
Hindi Translation तत्व तुम जानो ? मरकर आगे तुम क्या देखते हो ?
आज ही अब ही मानव ।
शिवाचार की रहस्य बातें करनी जैसी आसान नहीं देखो ।
भंडाफोड नहीं, व्यर्थ बात नहीं ।
एक ही रात के बिंदु देखो!
गुहेश्वर से मिलन की भेंट
आज सुख ; आगे भला!
Translated by: Eswara Sharma M and Govindarao B N
Tamil Translation மெய்ப்பொருளை நீ உணர்வாயோ?
இறந்த பிறகு நீ உணர்வாயோ?
மனிதனே, இப்பிறவியிலேயே உணர்வாய்!
சிவாசார இரகசியம் பேசுமளவிற்கு எளிமையன்று
தர்க்கம் சார்ந்ததன்று, வெற்றுரைகளன்று
இக்கணத்திலேயே பெறத்தக்க அனுபவம் காணாய்
குஹேசுவரனுடன் இணைவது
இன்று இன்பம், நாளை பேரின்பம்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಇಂದು = ಈ ಬದುಕಿನಲಿ; ಇಂದೆ = ಈಗಲೇ, ಇದೇ ಜನ್ಮದಲ್ಲಿ(ಕಾಣಬೇಕು); ಏಕೋ ರಾತ್ರಿಯ ಬಿಂದು = ಶಿವಸಾಮರಸ್ಯದ ರಸಾನುಭವವು, ಒಂದೇ ಒಂದು; ರಾತ್ರಿಯಲಿ, ಕ್ಷಣದಲಿ ಪಡೆಯಬಹುದಾದ ಅಮೃತಬಿಂದು.; ಕಾಬೆಯೊ? = ಕಾಣುವೆಯೊ? ತತ್ವ್ತವನು ಅರಿಯುವಿಯೊ?; ಕೂಡಿದ ಕೂಟ = ಶಿವ-ಜೀವ ಸಮರತಿ; ತತ್ತ್ವ = ಪರಮ ಸತ್ಯ; ನೀನೆತ್ತ ಬಲ್ಲೆಯೊ? = ನಿನಗೇನು ಗೊತ್ತು?; ಬೀದಿಯ ಮಾತು = ವ್ಯಾವಹಾರಿಕ ಮಾತು, ಸತ್ವವಿಲ್ಲದ ಮಾತು; ಮಾತಿನಂತುಟಲ್ಲ = ಮಾತನಾಡಿದಷ್ಟು ಹಗುರ ಅಲ್ಲ; ಮುಂದೆ = ಈ ಬದುಕಿನ ನಂತರ, ಎಂದೆಂದಿಗೂ; ರಚ್ಚೆಯ ಮಾತು = ತಾರ್ಕಿಕ ಹರಟೆ; ಲೇಸು = ವಿಮುಕ್ತಿಯ ಪರಮ ಆನಂದ; ಶಿವಾಚಾರದ ಸರಿದೊಡಕು = ಶಿವಾನುಭವದ ರಹಸ್ಯ; ಸುಖ = ಪರಮಸುಖ;
Written by: Sri Siddeswara Swamiji, Vijayapura