•  
  •  
  •  
  •  
Index   ವಚನ - 499    Search  
 
ಅಪರಿಮಿತ ಕತ್ತಲೆಯೊಳಗೆ ಪರಿಮಿತದ ಬೆಳಗನಿಕ್ಕಿದರಾರೊ. ಬೆಳಕೂ ಅದೆ, ಕತ್ತಲೆಯೂ ಅದೆ! ಇದೇನು ಚೋದ್ಯವೊ? ಒಂದಕ್ಕೊಂದಂಜದು! ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು ಬೆರಗಾದೆನು ಕಾಣಾ, ಗುಹೇಶ್ವರಾ.
Transliteration Aparimita kattaleyoḷage parimitada beḷaganikkidarāro. Beḷakū ade, kattaleyū ade! Idēnu cōdyavo? Ondakkondan̄jadu! Āneyū sinhavū ondāgi umbuda kaṇḍu beragādenu kāṇā, guhēśvarā.
Music Courtesy:
Hindi Translation अपरिमित अंधकार में प्रतिकूल ज्ञान रहे तो वहीं ज्ञान, वहीं अंधकार ! यह क्या विस्मय? एक दूसरे से नहीं डरते। हाथी केसरी मिलकर खाते देख , चकित हुआ गुहेश्वरा । Translated by: Eswara Sharma M and Govindarao B N
Tamil Translation அடர்ந்த காரிருளிலே விபரீதமான விளக்கை இடின் விளக்கும் அதுவே! இருளும் அதுவே! இது என்ன வியப்போ? ஒன்றைக் கண்டு ஒன்று அஞ்சுமோ! யானையும், சிங்கமும் ஒன்றாக உண்பதைக் கண்டு வியப்புற்றேன், காணாய், குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಪರಿಮಿತದದ ಕತ್ತಲೆ = ಅತ್ಯಂತ ಗಾಢವಾದ ಮಾಯಾಂಧಕಾರ, ಇತಿಮಿತಿಗಳಿಲ್ಲದ ಸಾಂಸಾರಿಕ ವ್ಯಾಮೋಹ; ವಿಪರೀತದ ಬೆಳಕು = ಮಾಯೆಗೆ ವಿಪರೀತವಾದ ಬೆಳಕು, ನಿರ್ಮಾಯಿಕವಾದ ಆತ್ಮವಿಷಯಕ ಜ್ಞಾನ; Written by: Sri Siddeswara Swamiji, Vijayapura