ಎನ್ನ ಸತ್ಕ್ರೀ ಸಂಗನಬಸವಣ್ಣ
ಎನ್ನ ಸುಜ್ಞಾನವೇ ಚೆನ್ನಬಸವಣ್ಣ
ಈ ಎರಡರ ಏಕೀಭಾವವೇ ಪ್ರಭುವೆ ನೀವು ನೋಡಾ!
ನಿಮ್ಮೆಲ್ಲರ ನೈಷ್ಠಯೇ ಮಡಿವಾಳಯ್ಯನು!
ಇಂತೀ ಚತುರ್ವಿಧವೆನಗೆ ಬೇಕಾದ ಕಾರಣ
ಇಷ್ಟಲಿಂಗದ ಸೇವೆ ಚರಲಿಂಗದ ದಾಸೋಹವೆಂಬುದನು
ಬಸವಣ್ಣಪ್ರಿಯ ಚಂದೇಶ್ವರಲಿಂಗದಲ್ಲಿ
ಚೆನ್ನಬಸವಣ್ಣನ ಕೈಯಲ್ಲಿ ಎನಗೆ ತಿಳುಹಿಕೊಡಾ ಪ್ರಭುವೇ!