Index   ವಚನ - 31    Search  
 
ಜಲಚರಕೇಕೆ ತೆಪ್ಪದ ಹಂಗು? ವಿಹಂಗಗೇಕೆ ಅಡಿವಜ್ಜೆಯ ಮೆಟ್ಟು? ಮಧುರರಸಕ್ಕೇಕೆ ಮೇಲಪ್ಪ ಸಿಹಿ? ಕಲ್ಪವೃಕ್ಷಕ್ಕೇಕೆ ಕಾಲದ ಹಂಗು? ದಾಸೋಹವನರಿದು ಮಾಡುವಂಗೆ ಇನ್ನೇತರ ಪೂಜೆ ಪುಣ್ಯ? ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಎಡೆದೆರಪಿಲ್ಲ.