Index   ವಚನ - 30    Search  
 
ಜಂಗಮಸೇವೆಯ ಚಿತ್ತ ಶುದ್ಧವಾಗಿ ಮಾಡುವಲ್ಲಿ ಗುರುಸೇವೆ ಸಂದಿತ್ತು. ಜಂಗಮಸೇವೆಯ ಚಿತ್ತಶುದ್ಧವಾಗಿ ಮಾಡಲಾಗಿ ಲಿಂಗಪೂಜೆ ಸಂದಿತ್ತು. ಜಂಗಮದಾಸೋಹದಿಂದ ಸರ್ವ ಪದವಾಯಿತ್ತು. ಆ ಗುಣವನರಿದು ಹರಿಯಲಾಗಿ ಬಟ್ಟಬಯಲು ಕಾಣಬಂದಿತ್ತು. ಹುಟ್ಟುವ ಹೊಂದುವ ನೆಲೆ ಇತ್ತಲೆ ಉಳಿಯಿತ್ತು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗವನರಿಯಲಾಗಿ.