ಪಂಜ ಹಿಡಿವಂಗೆ ಸಂದೇಹವೆಲ್ಲಿದೆ
ಉರಿವ ಬೆಳಗಿಂಗೆ ಸಂದೇಹವುಂಟೆ?
ಸಂಸಾರ ಸಂದಣಿಯಲ್ಲಿ ಅನಂಗನ ಆತುರದಲ್ಲಿ
ಹೊಂದಿ ಬೇವಂಗೆ ಲಂದಣತನವಲ್ಲದೆ
ನಿಜಪ್ರಸಂಗಿಗೆ, ನಿರತಿಶಯ ಲಿಂಗಾಂಗಿಗೆ,
ಪರಬ್ರಹ್ಮಪರಿಣಾಮಿಗೆ
ಜಗದ ಹರದಿಗರಲ್ಲಿ ಸಿಕ್ಕಿ
ಪರಿಭ್ರಮಣಕ್ಕೊಳಗಾಹನೆ?
ಇಂತೀ ನಿಜವನರಿದಾತನೆ
ಚೆನ್ನಬಸವಣ್ಣ ಸಾಕ್ಷಿಯಾಗಿ
ಕಮಳೇಶ್ವರಲಿಂಗವು ತಾನೆಂಬೆನು.
Art
Manuscript
Music
Courtesy:
Transliteration
Pan̄ja hiḍivaṅge sandēhavellide
uriva beḷagiṅge sandēhavuṇṭe?
Sansāra sandaṇiyalli anaṅgana āturadalli
hondi bēvaṅge landaṇatanavallade
nijaprasaṅgige, niratiśaya liṅgāṅgige,
parabrahmapariṇāmige
jagada haradigaralli sikki
paribhramaṇakkoḷagāhane?
Intī nijavanaridātane
cennabasavaṇṇa sākṣiyāgi
kamaḷēśvaraliṅgavu tānembenu.