ಬೆನ್ನಪಳಿಗೆ ಎನ್ನ ಕೇಳಬೇಡ.
ಅಂಗಾಲ ಹುಣ್ಣಿಗೆ ಎನ್ನ ಕೇಳಬೇಡ.
ಬಾಯೊಳಗಣ ಬಗದಳಕ್ಕೆ ಎನ್ನ ಕೇಳಬೇಡ.
ಆ ವ್ಯಾಧಿಗೆ ಬಲ್ಲವರ ಬಲ್ಲೆ.
ಬೆನ್ನಿಗೆ ಬಸವಣ್ಣ, ಕಾಲಿಗೆ ಚೆನ್ನಬಸವಣ್ಣ,
ಬಾಯಿಗೆ ಪ್ರಭುದೇವರು, ಬಸುರಿಗೆ ನಿಜಗುಣ.
ಈ ರೋಗವ ಬಲ್ಲವರಿವರು,
ಮಿಕ್ಕಾದ ವ್ಯಾಧಿಗೆ ನಾನರಸು.
ಮತ್ತಾರುವ ಬಳಿವಿಡಿಯಲಿಲ್ಲ.
ಚೆನ್ನಬಸವಣ್ಣ ಮುಂತು
ಕಮಳೇಶ್ವರಲಿಂಗ ಹಿಂತುಳಿದು
ಒಡಗೂಡಬೇಕು.
Art
Manuscript
Music
Courtesy:
Transliteration
Bennapaḷige enna kēḷabēḍa.
Aṅgāla huṇṇige enna kēḷabēḍa.
Bāyoḷagaṇa bagadaḷakke enna kēḷabēḍa.
Ā vyādhige ballavara balle.
Bennige basavaṇṇa, kālige cennabasavaṇṇa,
bāyige prabhudēvaru, basurige nijaguṇa.
Ī rōgava ballavarivaru,
mikkāda vyādhige nānarasu.
Mattāruva baḷiviḍiyalilla.
Cennabasavaṇṇa muntu
kamaḷēśvaraliṅga hintuḷidu
oḍagūḍabēku.