ನಾನಾ ಜನ್ಮಂಗಳಲ್ಲಿ ಬಂದಡೂ,
ನಾನಾ ಯುಕ್ತಿಯಲ್ಲಿ ನುಡಿದಡೂ,
ನಾನಾ ಲಕ್ಷಣಂಗಳಲ್ಲಿ ಶ್ರುತ ದೃಷ್ಟ
ಅನುಮಾನಂಗಳ ಲಕ್ಷಿಸಿ ನುಡಿವಲ್ಲಿ
ಏನನಹುದು ಏನನಲ್ಲಾಯೆಂಬ ಠಾವನರಿಯಬೇಕು.
ಮಾತ ಬಲ್ಲೆನೆಂದು ನುಡಿಯದೆ,
ನೀತಿವಂತನೆಂದು ಸುಮ್ಮನಿರದೆ,
ಆ ತತ್ಕಾಲದ ನೀತಿಯನರಿದು
ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ
ನಿರೀಕ್ಷಣ ಕದಂಬಲಿಂಗಾ.
Art
Manuscript
Music
Courtesy:
Transliteration
Nānā janmaṅgaḷalli bandaḍū,
nānā yuktiyalli nuḍidaḍū,
nānā lakṣaṇaṅgaḷalli śruta dr̥ṣṭa
anumānaṅgaḷa lakṣisi nuḍivalli
ēnanahudu ēnanallāyemba ṭhāvanariyabēku.
Māta ballenendu nuḍiyade,
nītivantanendu sum'manirade,
ā tatkālada nītiyanaridu
sātvika lakṣaṇadallippātana lakṣaṇavē
nirīkṣaṇa kadambaliṅgā.