Index   ವಚನ - 4    Search  
 
ಮೂರು ಕೋಲ ಬ್ರಹ್ಮಂಗೆ ಅಳೆದು ಕೊಟ್ಟೆ; ನಾಲ್ಕು ಕೋಲ ವಿಷ್ಣುವಿಂಗೆ ಅಳೆದು ಕೊಟ್ಟೆ; ಐದು ಕೋಲ ರುದ್ರಂಗೆ ಅಳೆದು ಕೊಟ್ಟೆ; ಆರು ಕೋಲ ಈಶ್ವರಂಗೆ ಅಳೆದು ಕೊಟ್ಟೆ; ಒಂದು ಕೋಲ ಸದಾಶಿವಂಗೆ ಅಳೆದು ಕೊಟ್ಟೆ. ಇಂತೀ ಐವರು ಕೋಲಿನ ಒಳಗು ಹೊರಗಿನಲ್ಲಿ ಅಳಲುತ್ತ ಬಳಲುತ್ತ ಒಳಗಾದರು. ಇಂತೀ ಒಳ ಹೊರಗ ಸೋಧಿಸಿಕೊಂಡು ಅಳಿವು ಉಳಿವಿನ ವಿವರವನರಿಯಬೇಕು, ಧಾರೇಶ್ವರಲಿಂಗವನರಿವುದಕ್ಕೆ.