Index   ವಚನ - 3    Search  
 
ಬೋದಿಗೆ ನಾಲ್ಕು, ಕಂಬವೆಂಟು, ಅರುಗುಗಾಲು ಹತ್ತು, ತೊಲೆಯೊಂದೇ ಏರಿತ್ತು. ಮುಚ್ಚಳವಲಗಿಗೆ ದಿಕ್ಕು ಕಾಣದೆ ಕರ್ಮಕಾಂಡಿಗಳೆಲ್ಲರು ಕಾಮನ ಕಾಮಾಟಕ್ಕೆ ಒಳಗಾಗಿ ಹೋದರು. ಈ ಗುಣವ ನಾನು ನೀನೆಂಬುದ ತಿಳಿದು ನೋಡು ಧಾರೇಶ್ವರಲಿಂಗವನರಿವುದಕ್ಕೆ.