Index   ವಚನ - 5    Search  
 
ಕಾಯವಿಕಾರವಳಿದಲ್ಲದೆ ಗುರುಸ್ಥಲಕ್ಕೆ ಸಲ್ಲ. ಮನೋವಿಕಾರವಳಿದಲ್ಲದೆ ಲಿಂಗಪೂಜಕನಲ್ಲ. ತ್ರಿವಿಧಮಲ ದೂರಸ್ಥನಲ್ಲದೆ ವಿರಕ್ತಭಾವಿಯಲ್ಲ. ಇಂತೀ ಒಂದೊಂದರಲ್ಲಿ ಒಂದು ಕಲೆಯಿದ್ದು ಮತ್ತೆ ಲಿಂಗದಲ್ಲಿ ನಿಂದಲ್ಲಿ ಸನ್ಮುಕ್ತನಲ್ಲ. ಇಂತೀ ಬಂಧ ಮೋಕ್ಷ ಕರ್ಮಂಗಳ ಬಿಟ್ಟು ನಿಜ ಸಂದು ಸುಖಿಯಾಗಬಲ್ಲಡೆ ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದಲ್ಲಿ ಸದ್ಭಾವವಂತ ಶರಣನಾದವನ ತೆರ.