ಮಹಿಮೆ ರುದ್ರನ ಹಂಗು,
ಧ್ಯಾನ ಈಶ್ವರನ ಹಂಗು,
ಜ್ಞಾನ ಸದಾಶಿವನ ಹಂಗು.
ಇಂತೀ ಒಂದರ ಹಂಗಿನಲ್ಲಿ ಒಂದನರಿದು
ಒಂದ ಕಾಣಿಸಿಕೊಂಡು, ಒಂದ ನಿಧಾನಿಸಿಕೊಂಡು
ಒಂದರಲ್ಲಿ ಹೆರೆಹಿಂಗದೆ ನಿಂದುದು
ತ್ರಿವಿಧ ಸಂಗದ ಸಗುಣ
ಇಂತೀ ತ್ರಿವಿಧವನೊಂದುಗೂಡಿ
ಕರ್ಪೂರದ ಸುವಾಸನೆ ಕಿಚ್ಚಿನ
ತಪ್ಪಲಲ್ಲಿಯೇ ನಷ್ಟವಾದಂತೆ.
ಇಂತೀ ತಾ ದೃಷ್ಟದಲ್ಲಿ ಲಕ್ಷಿಸಿ
ಅಲಕ್ಷ್ಯವಾದುದು ಕೂಗಿನ ಹೊರಗು
ಮಹಾಮಹಿಮ ಮಾರೇಶ್ವರಾ.
Art
Manuscript
Music
Courtesy:
Transliteration
Mahime rudrana haṅgu,
dhyāna īśvarana haṅgu,
jñāna sadāśivana haṅgu.
Intī ondara haṅginalli ondanaridu
onda kāṇisikoṇḍu, onda nidhānisikoṇḍu
ondaralli herehiṅgade nindudu
trividha saṅgada saguṇa
intī trividhavanondugūḍi
karpūrada suvāsane kiccina
tappalalliyē naṣṭavādante.
Intī tā dr̥ṣṭadalli lakṣisi
alakṣyavādudu kūgina horagu
mahāmahima mārēśvarā.